ರಾಜಮನೆತನದ ಕುರಿತ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರಹೇಳಿಕೆ ವಿರೋಧಿಸಿ ಮೈಸೂರಿನಲ್ಲಿಪೋಸ್ಟ್ಕಾರ್ಡ್ ಅಭಿಯಾನ ಶುರುವಾಗಿದೆ. ಮೈಸೂರು ಮಹಾರಾಜರ ಕೊಡುಗೆಗಳನ್ನು ತಿಳಿಸುವ ಉದ್ದೇಶದಿಂದ ಅವರ ಬೆಂಗಳೂರು ಕಚೇರಿಗೆ ಅಂಚೆ ಕಾರ್ಡ್ಗಳನ್ನು ಕಳುಹಿಸಲಾಗುತ್ತಿದೆ. ಸಚಿವರು ಕ್ಷಮೆ ಯಾಚಿಸಿ ರಾಜೀನಾಮೆ ನೀಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಮೈಸೂರು, ಅಕ್ಟೋಬರ್ 30: ಮೈಸೂರಿನಲ್ಲಿ ದಸರಾ ದಂಗಲ್ ಮುಂದುವರಿದಿದ್ದು, ಮಹಾರಾಜರ ಬಗ್ಗೆ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ವಿರುದ್ಧ ಪೋಸ್ಟ್ಕಾರ್ಡ್ ಅಭಿಯಾನ ಆರಂಭಿಸಲಾಗಿದೆ. ಮೈಸೂರು ಮಹಾರಾಜರ ಕುಟುಂಬ ಮತ್ತು ದೇವಸ್ಥಾನಗಳಿಗೆ ಅಪಾರ ಕೊಡುಗೆಗಳನ್ನು ನೀಡಿದೆ. ಈ ಕುರಿತು ಯತೀಂದ್ರ ಅವರಿಗೆ ಸರಿಯಾದ ಮಾಹಿತಿ ಇಲ್ಲದಿದ್ದರೆ, ಹಿರಿಯರನ್ನು ಕೇಳಿ ತಿಳಿದುಕೊಳ್ಳಲಿ ಎಂದು ಅಭಿಯಾನದ ಆಯೋಜಕರು ತಿಳಿಸಿದ್ದಾರೆ.