ಗೂಗಲ್ನ ಮಾತೃಸಂಸ್ಥೆ ಆಲ್ಫಬೆಟ್ನ ಮಾರ್ಕೆಟ್ ಕ್ಯಾಪ್ ಒಂದೇ ದಿನದಲ್ಲಿ 500 ಬಿಲಿಯನ್ ಡಾಲರ್ ಕುಸಿತ ಕಂಡಿದೆ. ಆಲ್ಫಬೆಟ್ನ ಹೂಡಿಕೆದಾರರಿಗೆ ಒಂದು ದಿನದಲ್ಲಿ ಆದ ಲಾಭನಷ್ಟ ಬರೋಬ್ಬರಿ 47 ಲಕ್ಷ ಕೋಟಿ ರೂ. ಎಐ ಸೌಕರ್ಯಗಳಿಗಾಗಿ ಆಲ್ಫಬೆಟ್ ಸಾಕಷ್ಟು ವ್ಯಯಿಸಿರುವುದು, ಗೂಗಲ್ ಸರ್ಚ್ನಿಂದ ನಿರೀಕ್ಷಿತ ಆದಾಯ ಬರದೇ ಹೋಗಿರುವುದು ಈ ಕುಸಿತಕ್ಕೆ ಕಾರಣ ಎನ್ನಲಾಗಿದೆ. ವಾಷಿಂಗ್ಟನ್, ಅಕ್ಟೋಬರ್ 30: ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿ ಎನಿಸಿದ ಗೂಗಲ್ನ ಮಾತೃ ಸಂಸ್ಥೆಯಾದ ಆಲ್ಫಬೆಟ್ ಷೇರು ಮಾರುಕಟ್ಟೆಯಲ್ಲಿ ತೀವ್ರ ಹಿಂಜರಿತ ಅನುಭವಿಸಿದೆ. ಇದು ಅದರ ಒಂದು ದಿನದ ಗರಿಷ್ಠ ಕುಸಿತ ಎನಿಸಿದೆ.