ಕರಾವಳಿಗೆ ಬಹುನಿರೀಕ್ಷಿತ ಬೆಂಗಳೂರು-ಕಾರವಾರ, ಮಡಗಾಂವ್ ವಂದೇ ಭಾರತ್ ರೈಲು ನವೆಂಬರ್ನಲ್ಲಿ ಸಂಚಾರ ಆರಂಭಿಸಲಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಭರವಸೆ ನೀಡಿದ್ದಾರೆ. ಕೊಂಕಣ ರೈಲ್ವೆ ವಿಲೀನ ಹಾಗೂ ಚಿಕ್ಕಮಗಳೂರು-ಬೆಂಗಳೂರು ಇಂಟರ್ಸಿಟಿ ರೈಲು ಸೇರಿದಂತೆ ಹಲವು ರೈಲ್ವೆ ಅಭಿವೃದ್ಧಿ ಬೇಡಿಕೆಗಳ ಬಗ್ಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದು ಕರ್ನಾಟಕದ ರೈಲ್ವೆ ಪ್ರಯಾಣಿಕರಿಗೆ ಶುಭ ಸುದ್ದಿ. ಉಡುಪಿ, ಅ.30: ಕರಾವಳಿ ಹಾಗೂ ಮಲೆನಾಡು ಭಾಗದ ರೈಲ್ವೆ ಪ್ರಯಾಣಿಕರ ದೀರ್ಘಕಾಲದ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ.