ಪ್ರಧಾನಮಂತ್ರಿ ಕಿಸಾನ್ ಯೋಜನೆ ಅಡಿ ಕೇಂದ್ರ ಸರ್ಕಾರ 24ನೇ ಕಂತಿನ ಹಣವನ್ನು ಇಂದು ಅಕ್ಟೋಬರ್ 30ರಂದು ಬಿಡುಗಡೆ ಮಾಡಿದೆ. ಗುಜರಾತ್ನ ಬನಸ್ಕಾಂತದಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರು ಹಣ ಬಿಡಗಡೆ ವಿಚಾರವನ್ನು ಘೋಷಿಸಿದರು. 9.34 ಕೋಟಿಗೂ ಅಧಿಕ ರೈತರಿಗೆ ತಲಾ 2,000 ರೂನಂತೆ ಒಟ್ಟು 18,000 ಕೋಟಿ ರೂಗೂ ಅಧಿಕ ಮೊತ್ತವನ್ನು ಸರ್ಕಾರ ಬಿಡುಗಡೆ ಮಾಡಿದೆ. ಬನಸ್ಕಾಂತ, ಗುಜರಾತ್, ಅಕ್ಟೋಬರ್ 30: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ 24ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ.