ನಟ ಧನ್ವೀರ್ ವಿರುದ್ಧ ದರ್ಶನ್ ಅವರು ನ್ಯಾಯಾಲಯಕ್ಕೆ ಸ್ಟೇ ಅರ್ಜಿ ಹಾಕಿದ್ದಾರೆ. ಅರ್ಜಿಯಲ್ಲಿ ಯಾವೆಲ್ಲ ಅಂಶಗಳನ್ನು ಉಲ್ಲೇಖಿಸಲಾಗಿದೆ ಎಂಬ ಬಗ್ಗೆ ದರ್ಶನ್ ಪರ ವಕೀಲರಾದ ರಂಗನಾಥ್ ರೆಡ್ಡಿ ಅವರು ಮಾಹಿತಿ ನೀಡಿದ್ದಾರೆ. ಟಿವಿ9 ಜೊತೆ ಮಾತನಾಡಿರುವ ಅವರು ಕೆಲವು ಪ್ರಮುಖ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ಕಳೆದ 4-5 ದಿನಗಳಿಂದ ದರ್ಶನ್ ಅವರ ಕುಟುಂಬದ ತೇಜೋವಧೆ ಆಗುತ್ತಿದೆ. ದರ್ಶನ್ ಅವರ ಹೆಸರು ಮತ್ತು ಅಭಿಮಾನಿ ಬಳಗದ ದುರ್ಬಳಕೆ ಆಗಿದೆ. ಧನ್ವೀರ್ ಮೊದಲು ನಂಬಿಕೆ ಗಳಿಸಿ, ಆಮೇಲೆ ನಡುನೀರಿನಲ್ಲಿ ಕೈಬಿಟ್ಟಿದ್ದಾರೆ. ಈ ಅಂಶಗಳನ್ನು ಅರ್ಜಿಯಲ್ಲಿ ದರ್ಶನ್ ಹೇಳಿಕೊಂಡಿದ್ದಾರೆ’ ಎಂದು ವಕೀಲರು ಮಾಹಿತಿ ನೀಡಿದ್ದಾರೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.