ಆರೋಪಿ ಮಹಿಳೆ ಹಾಗೂ ಸ್ಥಳೀಯ ಜಿಮ್ ತರಬೇತುದಾರನ ನಡುವೆ ಅಕ್ರಮ ಸಂಬಂಧವಿತ್ತು. ಈ ವಿಷಯ ಪತಿಗೆ ತಿಳಿದು ಗಲಾಟೆಯಾಗುತ್ತಿದ್ದ ಹಿನ್ನೆಲೆಯಲ್ಲಿ, ಪತಿಯನ್ನು ಕೊಲ್ಲಲು ಇಬ್ಬರೂ ಪ್ಲಾನ್ ರೂಪಿಸಿದ್ದರು. ಹತ್ಯೆ ನಡೆಯುವ ಮುನ್ನ ಏನೇನಾಯ್ತು ಎಂಬುದು ಈ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಬೆಳಗಿನ ಜಾವ ಜಿಮ್ಗೆ ಕಾರಿನಲ್ಲಿ ಹೊರಟ ಆ ಮಹಿಳೆ ಮನೆಯಿಂದ ಹೊರಟ ಕೂಡಲೆ ಅಲ್ಲಿಗೆ ಬಂದ ಆಕೆಯ ಪ್ರಿಯಕರ ಮನೆಯೊಳಗೆ ಹೋಗಿ ಕೊಲೆ ಮಾಡಿದ್ದಾನೆ. ಕಿರುಚಾಟದ ಶಬ್ದ ಕೇಳಿ ಅಕ್ಕಪಕ್ಕದವರು ಬಂದಾಗ ಆತ ಓಡಿಹೋಗಿದ್ದಾನೆ. ಆತನನ್ನು ಹಿಡಿಯಲು ಜನ ಓಡುವುದು ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ.