ಪರಪ್ಪನ ಅಗ್ರಹಾರ ಜೈಲು ವಿಸ್ತರಣೆ ಮತ್ತು ಭದ್ರತೆಗಾಗಿ 19 ಎಕರೆ ಭೂಸ್ವಾಧೀನ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಕೈದಿಗಳಿಗೆ ಸುರಕ್ಷಿತ ವಸತಿ, ಆರೋಗ್ಯ ರಕ್ಷಣೆ, ಶಿಕ್ಷಣ ಹಾಗೂ ವೃತ್ತಿಪರ ತರಬೇತಿ ನೀಡುವ ಮೂಲಕ ಸುಧಾರಣೆ ತರಲು ಇದು ಅವಶ್ಯಕ. ಸೆರೆವಾಸ ಕೇವಲ ಶಿಕ್ಷೆಯಾಗಿರದೆ, ಉತ್ತಮ ಸಮಾಜ ನಿರ್ಮಾಣದತ್ತ ಹೆಜ್ಜೆ ಇಡಬೇಕು ಎಂದು ಪೀಠ ಅಭಿಪ್ರಾಯಪಟ್ಟಿದೆ. ಬೆಂಗಳೂರು, ಅಕ್ಟೋಬರ್ 29: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿಸ್ತರಣೆ ಮತ್ತು ಭದ್ರತೆಯ ದೃಷ್ಟಿಯಿಂದ ಜೈಲಿನ ಸುತ್ತಮುತ್ತಲಿನ 19 ಎಕರೆ 18 ಗುಂಟೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ.