ನಂದಿನಿ ಹಾಲಿನ ದರ ಲೀಟರ್ಗೆ 8 ರೂಪಾಯಿ ಏರಿಕೆಯಾಗಿದೆ. ಇದರಲ್ಲಿ 7 ರೂ. ಹಾಲು ಉತ್ಪಾದಕರಿಗೆ ಮತ್ತು 1 ರೂಪಾಯಿ ಕೆಎಂಎಫ್ಗೆ ಸಿಗಲಿದೆ. ಡೀಸೆಲ್, ಪೆಟ್ರೋಲ್, ಪ್ಲಾಸ್ಟಿಕ್ ಪ್ಯಾಕಿಂಗ್ ಮತ್ತು ಸಾರಿಗೆ ವೆಚ್ಚಗಳು ಹೆಚ್ಚಳವಾಗಿರುವ ಕಾರಣ ಒಕ್ಕೂಟಗಳು ದರ ಏರಿಕೆಗೆ ಮನವಿ ಮಾಡಿದ್ದವು. ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಬೆಂಗಳೂರು, ಅಕ್ಟೋಬರ್ 29: ‘ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಹೆಚ್ಚಾದಾಗ, ನಾವು ಅದಕ್ಕೆ ಹೊಂದಿಕೊಳ್ಳುತ್ತೇವೆ. ಕುಡಿಯುವ ನೀರಿಗೂ ಬಾಟಲಿಗೆ ಹೆಚ್ಚು ಹಣ ನೀಡುತ್ತೇವೆ. ಆದರೆ, ರೈತರು ಕಷ್ಟಪಟ್ಟು ಉತ್ಪಾದಿಸುವ ಹಾಲಿಗೆ ಬೆಲೆ ಹೆಚ್ಚಳ ಮಾಡುವಾಗ ಜನ ವಿರೋಧಿಸುತ್ತಾರೆ’ ಎಂದು ಸಚಿವ ಕೃಷ್ಣಬೈರೇಗೌಡ ಪ್ರಶ್ನಿಸಿದರು.