ಕಾಪು ತಾಲೂಕಿನ ಕಟ್ಟಿಂಗೇರಿ ಗ್ರಾಮದ ಸ.ನಂ. 6/1ಸಿಯಲ್ಲಿ ಹಲವು ದಶಕಗಳಿಂದ ಪರಿಶಿಷ್ಟ ಜಾತಿ ಕುಟುಂಬಗಳು ವಾಸವಿದ್ದು, ಅವರಿಗೆ ಸರ್ಕಾರಿ ಜಮೀನು ಬಂಡೆ ಎಂಬ ಕಾರಣಕ್ಕೆ ಹಕ್ಕುಪತ್ರ ನೀಡಿಲ್ಲ. ಆದರೆ. ಆದರೆ ಈ ಜಮೀನನ್ನು ಸಾರಾಯಿ ಅಂಗಡಿಗೆ ಹಿಂದೆ ಮೀಸಲಿರಿಸಲಾಗಿತ್ತು ಎಂದು ಉಡುಪಿ ಜಿಲ್ಲಾಧಿಕಾರಿ 2025ರ ಮಾರ್ಚ್ 31ರಂದು ಹಿಂಬರಹ ನೀಡಿದ್ದಾರೆ. ಇದೇ ಹಿಂಬರಹವನ್ನು ಆಧಾರವಾಗಿಟ್ಟು ಕಾಪು ತಹಸೀಲ್ದಾರ್ 2026ರ ಅಕ್ಟೋಬರ್ 3ರಂದು ಹಿಂಬರಹ ನೀಡಿದ್ದಾರೆ.ರಸ್ತೆ, ಬಂಡೆ, ಕೆರೆ!ಕಾಪು ತಾಲೂಕು ವ್ಯಾಪ್ತಿಯ ಒಟ್ಟು 30 ಗ್ರಾಮಗಳಲ್ಲಿ ಲಭ್ಯವಿರುವ ಡಿಸಿ ಮನ್ನಾ ಜಮೀನಿನ ಬಗ್ಗೆ ಪ್ರಸ್ತುತ ಅಂಕಿಅಂಶಗಳನ್ನು ಪರಿಶೀಲಿಸಿದಾಗ ಕುರ್ಕಾಲು ಗ್ರಾಮದಲ್ಲಿ ಸ.ನಂ. 203/1ರಲ್ಲಿ 2.06 ಎಕರೆ ಮತ್ತು 203/8ರಲ್ಲಿ 1.26.