IE=edge" http-equiv="X-UA-Compatible">ಬೈಕ್ ಟ್ಯಾಕ್ಸಿ ವಿರುದ್ಧ ಚಾಲಕರ ಆಕ್ರೋಶ - ಮಡಿಕೇರಿಯಲ್ಲಿ ನಾಳೆ ಆಟೋ ಸಂಚಾರ ಬಂದ್! | Public TV - Latest Kannada News, Public TV Kannada Live, Public TV News. ಮಡಿಕೇರಿ: ಮಡಿಕೇರಿ ನಗರದಲ್ಲಿ ನಾಳೆ (ಶುಕ್ರವಾರ – ಅ.30) ಆಟೋ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ವಿರೋಧಿಸಿ ಆಟೋ ಮಾಲೀಕರು ಮತ್ತು ಚಾಲಕರ ಸಂಘ ಪ್ರತಿಭಟನೆಗೆ ಕರೆ ನೀಡಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಮಡಿಕೇರಿ ನಗರಾದ್ಯಂತ ಆಟೋ ಸಂಚಾರ ಬಂದ್ ಮಾಡಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಸಂಘ ನಿರ್ಧರಿಸಿದೆ.