ನವದೆಹಲಿ: ಕಳೆದ ವರ್ಷ ಮತ್ತು ಈ ವರ್ಷದ ಆರಂಭದಲ್ಲಿ ಅದೆಷ್ಟೋ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಬಿಸಾಡಿರುವ ಹೆಸರಾಂತ ಟೆಕ್ ದೈತ್ಯ ಸಂಸ್ಥೆ ಮೈಕ್ರೋಸಾಫ್ಟ್, ಈ ವರ್ಷವು ಭಾರಿ ಉದ್ಯೋಗ ಕಡಿತಕ್ಕೆ. ಇದರ ಬೆನ್ನಲ್ಲೇ, ಮೊನ್ನೆ ಮೊನ್ನೆಯಷ್ಟೇ 60 ಸಾವಿರಕ್ಕೂ ಹೆಚ್ಚು ನೌಕರರಿಗೆ ತಾವೇ ಕೆಲಸ ಬಿಟ್ಟುಹೋಗುವಂತೆ ಕೊಟ್ಟಿರುವ ಸ್ವಯಂ ಎಕ್ಸಿಟ್ ಆಫರ್ ಸದ್ಯ ಟೆಕ್ ಉದ್ಯೋಗ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಭಾರಿ ಪ್ರಮಾಣದ ಹೂಡಿಕೆ ಮಾಡುತ್ತಿರುವ ಮೈಕ್ರೋಸಾಫ್ಟ್, ಎಷ್ಟು ಸಾಧ್ಯವೋ ಅಷ್ಟು ವೆಚ್ಚ ಕಡಿತಗೊಳಿಸುವ ಉದ್ದೇಶದಿಂದ ಸುಮಾರು 60 ಸಾವಿರ ಉದ್ಯೋಗಿಗಳಿಗೆ ಸ್ವಯಂ ವಿದಾಯ ಹೇಳುವ ಆಫರ್ ಅನ್ನು ನೀಡಿದೆ.