ಚಿತ್ರದುರ್ಗ: ನಗರದಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾಗಿದ್ದ 'ರಶ್ವಿಕಾ ಎಕ್ಸಿಬಿಷನ್'ಗೆ ಗುರುವಾರ ಉತ್ತಮ ಸ್ಪಂದನೆ ವ್ಯಕ್ತವಾಯಿತು. Rashvika Exhibitionರಾಜ್ಯದ ವಿವಿಧೆಡೆಯ ಮಹಿಳಾ ಉದ್ಯಮಿಗಳು. Rashvika Exhibitionರಾಜ್ಯದ ವಿವಿಧೆಡೆಯ ಮಹಿಳಾ ಉದ್ಯಮಿಗಳು ಸ್ವತಃ ತಯಾರಿಸಿ ಮಾರಾಟಕ್ಕಿಟ್ಟಿದ್ದ ವಿಭಿನ್ನ ಶೈಲಿಯ ಸೀರೆಗಳು, ಆಭರಣಗಳು, ಸೌಂದರ್ಯವರ್ಧಕ ಸಾಮಗ್ರಿಗಳು ಹಾಗೂ ನಾನಾ ಬಗೆಯ ಗೃಹೋಪಯೋಗಿ ವಸ್ತುಗಳು ಗ್ರಾಹಕರ ಗಮನ ಸೆಳೆದವು.ಕಾರ್ಯಕ್ರಮದಲ್ಲಿ ಪ್ರಮುಖರಾದ ಜಿ. ಹರಿಣಿ, ರಾಧಾ ಸತೀಶ್, ಅನ್ನಪೂರ್ಣ ಲಿಂಗರಾಜು, ವೀಣಾ ಸ್ವಾಮಿ, ವೇದಾ ರವೀಂದ್ರ, ಫರ್ನಾಜ್ ಹಾಗೂ ರಶ್ವಿಕಾ ಎಕ್ಸಿಬಿಷನ್ಸ್ನ ಸಹ-ಸಂಸ್ಥಾಪಕರಾದ (ಕೋ-ಫೌಂಡರ್ಸ್) ರಶ್ಮಿ, ಶ್ವೇತಾ ಮತ್ತಿತರರು ಉಪಸ್ಥಿತರಿದ್ದರು.