ಕಂಪ್ಯೂಟರ್ ಆಧಾರಿತ ಕೆಲಸಗಳಲ್ಲಿ ಎಐ (AI) ತಂತ್ರಜ್ಞಾನದಿಂದಾಗಿ ಬೃಹತ್ ಬದಲಾವಣೆಗಳಾಗಲಿವೆ ಎಂದು ಜೋಹೋ ಮುಖ್ಯಸ್ಥ ಶ್ರೀಧರ್ ವೆಂಬು ಹೇಳಿದ್ದಾರೆ. ಒಬ್ಬ ಸ್ಮಾರ್ಟ್ ವ್ಯಕ್ತಿಯು 10 ಜನರ ಕೆಲಸವನ್ನು ಏಕಾಂಗಿಯಾಗಿ ನಿರ್ವಹಿಸಲು ಸಾಧ್ಯ ಎಂದಿದ್ದಾರೆ. ಉದ್ಯಮಗಳು ಈ ವಾಸ್ತವ ಸತ್ಯವನ್ನು ಅರ್ಥ ಮಾಡಿಕೊಂಡು ಅದನ್ನು ಸ್ವೀಕರಿಸಿ, ಅದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು ಎಂದಿದ್ದಾರೆ. ಚೆನ್ನೈ, ಅಕ್ಟೋಬರ್ 29: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ವೇಗವಾಗಿ ಬೆಳೆಯುತ್ತಿದ್ದು, ಇದು ಉದ್ಯೋಗ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಪರಿಣಾಮ ಬೀರಲಿದೆ ಎಂದು ಜೊಹೋ (Zoho) ಸಹ-ಸಂಸ್ಥಾಪಕ ಮತ್ತು ಮುಖ್ಯ ವಿಜ್ಞಾನಿ ಶ್ರೀಧರ್ ವೆಂಬು ಎಚ್ಚರಿಕೆ ನೀಡಿದ್ದಾರೆ.