ಇಂದಿನ ದಿನಗಳಲ್ಲಿ ಮೊಬೈಲ್ ಫೋನ್ ನಮ್ಮ ಅವಿಭಾಜ್ಯ ಅಂಗವಾಗಿದೆ. ಅನೇಕ ಜನರು ಬೆಳಗ್ಗೆ ಎದ್ದಾಗಿನಿಂದ ಹಿಡಿದು ರಾತ್ರಿ ಮಲಗುವವರೆಗೂ ಮೊಬೈಲ್ ಬಳಕೆ ಮಾಡ್ತಾರೆ. ಹೀಗೆ ಹೆಚ್ಚು ಹೊತ್ತು ಫೋನ್ ಯೂಸ್ ಮಾಡೋದು ಒಳ್ಳೆಯ ಅಭ್ಯಾಸವಲ್ಲ. ಅದರಲ್ಲೂ ಊಟ ಮಾಡುವಾಗ ಫೋನ್ ನೋಡಲೇಬಾರದು. ಇದು ಆರೋಗ್ಯದ ಮೇಲೆ ಸಾಕಷ್ಟು ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಹಾಗಿದ್ರೆ ಊಟ, ತಿಂಡಿ ಮಾಡುವಾಗ ಮೊಬೈಲ್, ಟಿವಿ ನೋಡುವುದರಿಂದ ಏನೆಲ್ಲಾ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಎಂಬುದುನ್ನು ತಿಳಿಯೋಣ ಬನ್ನಿ.