MS Dhoni: ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ಅವರನ್ನು 2017ರ ಐಪಿಎಲ್ ಸೀಸನ್ಗೂ ಮುನ್ನ ರೈಸಿಂಗ್ ಪುಣೆ ಸೂಪರ್ಜೈಂಟ್ಸ್ ತಂಡದ ನಾಯಕತ್ವದಿಂದ. ಎಸ್ಪಿಎನ್ಕ್ರಿಕ್ಇನ್ಫೋ ಶೋ ಕ್ರಿಕೆಟರ್ಸ್ ಆನ್ ಕ್ರಿಕೆಟರ್ಸ್ನಲ್ಲಿ ಮಾತನಾಡಿರುವ ಅವರು, ಆ ಸಂದರ್ಭದ ಕೆಲ ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.2016ರ ಚೊಚ್ಚಲ ಐಪಿಎಲ್ ಸೀಸನ್ನಲ್ಲಿ ಪುಣೆ ತಂಡವು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಇದರ ಬೆನ್ನಲ್ಲೇ ಫ್ರಾಂಚೈಸಿಯ ಮಾಲೀಕರು ಎಂ ಎಸ್ ಧೋನಿ ಅವರನ್ನು ನಾಯಕತ್ವದಿಂದ ತೆಗೆದುಹಾಕುವ ಅಚ್ಚರಿಯ ನಿರ್ಧಾರ ಕೈಗೊಂಡಿದ್ದರು.