ಕಲಬುರಗಿ: ಕಾವ್ಯದ ಪರಿಕರಗಳಾದ ರಸ, ಧ್ವನಿ, ಶೈಲಿ, ವಕ್ರೋಕ್ತಿ, ಅಲಂಕಾರ, ವ್ಯಂಗ್ಯಾರ್ಥ, ಲಕ್ಷಣಾರ್ಥ, ವಾಚ್ಯಾರ್ಥ ಹಾಗೂ ಕಾವ್ಯದ ಉಗಮ, ವಿಕಾಸ, ಲಾಕ್ಷಣಿಕರ ಪರಿಚಯ ಮತ್ತು ಅವರ ಸಿದ್ಧಾಂತಗಳನ್ನು ಅಧ್ಯಯನ ಮಾಡುವುದೇ ಕಾವ್ಯ ಮೀಮಾಂಸೆಯಾಗಿದೆ... ಚಿದಾನಂದ ಚಿಕ್ಕಮಠ ಹೇಳಿದರು.ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಬುಧವಾರ ಭಾರತೀಯ ಕಾವ್ಯ ಮೀಮಾಂಸೆ ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಕಾವ್ಯ ಮೀಮಾಂಸೆಯನ್ನು ಹಿಂದೆ ಕ್ರಿಯಾಕಲ್ಪ, ಅಲಂಕಾರಶಾಸ್ತ್ರ ಹಾಗೂ ಲಕ್ಷಣಗ್ರಂಥ ಎಂದು ಕರೆಯಲಾಗುತ್ತಿತ್ತು.