ತಿರುಮಲದಲ್ಲಿ ತೀವ್ರ ಕುಡಿಯುವ ನೀರಿನ ಅಭಾವದಿಂದ ಯಾತ್ರಿಕರಿಗೆ ಸಂಕಷ್ಟ ಎದುರಾಗಿದೆ. ಮಳೆಯ ಕೊರತೆಯಿಂದ ಜಲಾಶಯಗಳ ನೀರಿನ ಮಟ್ಟ ಕುಸಿದಿದ್ದು, TTD ದಿನಕ್ಕೆ 4 ಗಂಟೆ ಮಾತ್ರ ನೀರು ಪೂರೈಸುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಭವನದಲ್ಲಿ ಕೊಠಡಿ ಬುಕಿಂಗ್ ರದ್ದುಪಡಿಸಲಾಗಿದೆ. ಆನ್ಲೈನ್ ಬುಕಿಂಗ್ಗೆ ಮಾತ್ರ ಅವಕಾಶವಿದ್ದು, ಶಿಫಾರಸು ಪತ್ರಗಳ ಬುಕಿಂಗ್ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಮುಜರಾಯಿ ಇಲಾಖೆ ಖಾಸಗಿ ಟ್ಯಾಂಕರ್ಗಳ ಮೂಲಕ ನೀರು ಒದಗಿಸಲು ಹರಸಾಹಸ ಪಡುತ್ತಿದೆ.