‘ಪೆದ್ದಿ’ ಸಿನಿಮಾನಲ್ಲಿ ಜಾನ್ಹವಿಯನ್ನು ಕೇವಲ ಗ್ಲಾಮರ್ಗಾಗಿಯೇ ಇರಿಸಿಕೊಳ್ಳಲಾಗಿತ್ತು. ಅನವಶ್ಯಕವಾಗಿ ನಟಿಯ ದೇಹಸಿರಿಯನ್ನು ಮಾತ್ರವೇ ತೋರಿಸಲಾಗಿತ್ತು. ಇದು ಸಾಕಷ್ಟು ಟೀಕೆಗೆ ಗುರಿ ಆಗಿತ್ತು. ಕೆಲವರು ಜಾನ್ಹವಿಯ ಮೇಲೆ ತಪ್ಪು ಹೊರಿಸಿದ್ದರು. ‘ಇಂಥಹ ಪಾತ್ರವನ್ನು ಒಪ್ಪಿಕೊಂಡಿದ್ದು ಏಕೆ?’ ಎಂದಿದ್ದರು. ಜಾನ್ಹವಿ ಬಹಿರಂಗವಾಗಿ ಆ ಬಗ್ಗೆ ಮಾತನಾಡಿರಲಿಲ್ಲ, ಆದರೆ ಈಗ ‘ಕಾಫಿ ವಿತ್ ಕರಣ್’ನಲ್ಲಿ ಜಾನ್ಹವಿ ಕೊನೆಗೂ ಈ ಬಗ್ಗೆ ಮಾತನಾಡಿದ್ದಾರೆ. ರಾಮ್ ಚರಣ್ ಹಾಗೂ ಜಾನ್ಹವಿ ಕಪೂರ ನಟಿಸಿದ್ದ ‘ಪೆದ್ದಿ’ ಸಿನಿಮಾ ಇದೇ ವರ್ಷ ಜೂನ್ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಹಿಟ್ ಆಯಿತಾದರೂ ಸಿನಿಮಾನಲ್ಲಿ ನಟಿ ಜಾನ್ಹವಿ ಕಪೂರ್ ಪಾತ್ರವನ್ನು ತೋರಿಸಿದ ರೀತಿಯ ಬಗ್ಗೆ ತೀವ್ರ ಚರ್ಚೆ ಉಂಟಾಗಿತ್ತು.