ಧಾರವಾಡದಲ್ಲಿ ದ್ವಿತೀಯ ದರ್ಜೆ ಸಹಾಯಕ ರೇವಪ್ಪ ದುರದುಂಡಿ ಆತ್ಮಹತ್ಯೆ ಪ್ರಕರಣಕ್ಕೆ ಉದ್ಯೋಗ ಹಗರಣದ ತಿರುವು ಸಿಕ್ಕಿದೆ. 4 ಕೋಟಿಗೂ ಹೆಚ್ಚು ಹಣ ಸಂಗ್ರಹಿಸಿ ಮೋಸ ಮಾಡಲಾದ ಜಾಲಕ್ಕೆ ಸಿಲುಕಿ ರೇವಪ್ಪ ಆತ್ಮಹತ್ಯೆಗೆ ಶರಣಾಗಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಡೆತ್ನೋಟ್, 70ಕ್ಕೂ ಹೆಚ್ಚು ಚೆಕ್ಗಳು ಹಗರಣದ ವಿವರ ಬಹಿರಂಗಪಡಿಸಿದ್ದು, 10 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಧಾರವಾಡ, ಅ.29: ಧಾರವಾಡದ ಆದಿಶಕ್ತಿ ಬಡಾವಣೆಯಲ್ಲಿ ದ್ವಿತೀಯ ದರ್ಜೆ ಸಹಾಯಕ (SDA) ರೇವಪ್ಪ ದುರದುಂಡಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಇದೀಗ ಭಾರಿ ಸ್ಫೋಟಕ ತಿರುವು ಸಿಕ್ಕಿದೆ.