ಉತ್ತರ ಕನ್ನಡ ಜಿಲ್ಲೆಯ ಕುಗ್ರಾಮಗಳಲ್ಲಿ ಕಾಡುವ ನೆಟ್ವರ್ಕ್ ಸಮಸ್ಯೆಗೆ ಶಿರಸಿಯ ಮೂವರು ಯುವಕರು ಮೇಡ್ ಇನ್ ಇಂಡಿಯಾ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಂಡಿದ್ದಾರೆ. ಮೈಕ್ರೋ ಸೆಲ್ ಹಾಗೂ ಫೆಮ್ಟೋಸೆಲ್ ಸಾಧನಗಳ ನೆರವಿನಿಂದ ಟವರ್ ಇಲ್ಲದ ದಟ್ಟ ಕಾಡಿನಲ್ಲೂ ಬಿಎಸ್ಎನ್ಎಲ್ 4G ಸೇವೆ ಪಡೆಯುವ ಈ ಪ್ರಯೋಗ ಯಲ್ಲಾಪುರದಲ್ಲಿ ಯಶಸ್ವಿಯಾಗಿದೆ. ಪಶ್ಚಿಮ ಘಟ್ಟದ ದಟ್ಟ ಕಾಡುಗಳಿಂದ ಆವೃತವಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಹೊಸದೇನಲ್ಲ. ಹಳ್ಳಿಗಳ ಭಾಗದಲ್ಲಿ ಏನೇ ಮಾಡಿದರೂ ನೆಟ್ವರ್ಕ್ ಸಿಗೋದಿಲ್ಲ. ಕಂಪನಿಯವರು ವರ್ಕ್ ಫ್ರಮ್ ಹೋಂ ಕೊಟ್ಟರೂ ಊರಿಗೆ ಬಂದು ಕೆಲಸ ಮಾಡಲಾಗದ ಪರಿಸ್ಥಿತಿ ಇದೆ. ಒಂದು ಕಾಲ್ ಮಾಡಲು ಗುಡ್ಡ-ಬೆಟ್ಟ, ಮರ ಹತ್ತುವ ಅನಿವಾರ್ಯತೆ ಇದೆ.