ಹೊಸಪೇಟೆ: ಹಲವು ವರ್ಷಗಳಿಂದ ಮೂಲಸೌಕರ್ಯ ಕೊರತೆ, ಶಿಥಿಲ ಕಟ್ಟಡ ಹಾಗೂ ಸ್ಥಳಾವಕಾಶ ಸಮಸ್ಯೆಯಿಂದ ಸೊರಗಿದ್ದ ಇಲ್ಲಿನ ಪಶುಸಂಗೋಪನೆ ಇಲಾಖೆಗೆ ಇದೀಗ ಮುಕ್ತಿ ಸಿಕ್ಕಿದೆ. ಹೌದು ಗಣಿ ಬಾಧಿತ ಪ್ರದೇಶಗಳ. ಹೌದು ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿ ಯೋಜನೆಯಡಿ ಗಣಿ ಮತ್ತು ಖನಿಜ ನಿಗಮದಿಂದ ಬರೋಬ್ಬರಿ 20.68 ಕೋಟಿ ರೂ. ಅನುದಾನ ಮೀಸಲಿರಿಸಿದ್ದು, ಇಲಾಖೆ ಚಿತ್ರಣವೇ ಬದಲಾಗಲಿದೆ.ರೈತರ ಜೀವನಾಡಿಯಾಗಿರುವ ಜಾನುವಾರುಗಳ ಆರೋಗ್ಯ ರಕ್ಷಣೆ, ಆಧುನಿಕ ಚಿಕಿತ್ಸೆ ಮತ್ತು ರೈತರಿಗೆ ತರಬೇತಿ ನೀಡುವ ಬಹುನಿರೀಕ್ಷಿತ ಯೋಜನೆಗಳಿಗೆ ಈಗಾಗಲೇ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಗೊಂಡಿದ್ದು, ಕಾಮಗಾರಿಗಳಿಗೆ ವೇಗ ದೊರೆಯುತ್ತಿದೆ. ಗ್ರಾಮೀಣ ಭಾಗದ ಮೂಕ ಪ್ರಾಣಿಗಳ ಚಿಕಿತ್ಸೆಗೆ ಅನುಕೂಲವಾಗುವಂತೆ ತಾಲೂಕಿನ ಪ್ರಮುಖ ಕೇಂದ್ರಗಳಲ್ಲಿ ಮೂಲಸೌಕರ್ಯ ಬಲಪಡಿಸಲಾಗುತ್ತಿದೆ.