ದೇಶದಲ್ಲಿ ಎಸ್ಐಆರ್ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಪ್ರಮುಖ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಸಿಜೆಪಿ ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ. ನವದೆಹಲಿ, ಅಕ್ಟೋಬರ್ 28: ಚುನಾವಣಾ ಅಕ್ರಮಗಳು ಮತ್ತು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಆರೋಪಗಳ ವಿರುದ್ಧದ ಪ್ರತಿಭಟನೆಗಳು ಚಳವಳಿಯ ರೂಪ ಪಡೆಯುತ್ತಿರುವ ಸೂಚನೆ ಸಿಕ್ಕಿದೆ. ಕಾಂಗ್ರೆಸ್ನಿಂದ ಹಲವು ತಿಂಗಳುಗಳ ಕಾಲ ಅಂತರ ಕಾಯ್ದುಕೊಂಡಿದ್ದ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ 'ಇಂಡಿಯಾ' ಒಕ್ಕೂಟದ ಬೃಹತ್ ರ್ಯಾಲಿಗೆ ತನ್ನ ಬೆಂಬಲ ಘೋಷಿಸಿದೆ.