ಮಹಿಳಾ ಪ್ರೀಮಿಯರ್ ಲೀಗ್ 2027ರ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕರ್ನಾಟಕದ 15ರ ಹರೆಯದ ಉಮಾ ಕಾಶ್ವಿ ಅವರನ್ನು 10 ಲಕ್ಷಕ್ಕೆ ಖರೀದಿಸಿದೆ. ಈ ಮೂಲಕ WPL ಇತಿಹಾಸದಲ್ಲೇ ಖರೀದಿಯಾದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ದಾಖಲೆ ಉಮಾ ಪಾಲಾಗಿದೆ. ಬಲಗೈ ಸ್ಪಿನ್ ಆಲ್ರೌಂಡರ್ ಆಗಿರುವ ಉಮಾ, ಭಾರತ U19 ತಂಡವನ್ನು ಪ್ರತಿನಿಧಿಸಿದ್ದರು. ಜೆಮಿಮಾ ರೋಡ್ರಿಗಸ್ ಮಾರ್ಗದರ್ಶನ ಪಡೆದ ಇವರಿಗೆ WPL ದೊಡ್ಡ ವೇದಿಕೆಯಾಗಿದೆ.