ಟೋಲ್ ಪ್ಲಾಜ್ ಬಳಿಯ ನಿವಾಸಿಗಳಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳ 20 ಕಿ.ಮೀ ವ್ಯಾಪ್ತಿಯಲ್ಲಿರುವ ಖಾಸಗಿ ವಾಹನ ಸವಾರರಿಗೆ ಕೇಂದ್ರ ಸರ್ಕಾರ ರಿಯಾಯಿತಿ ದರದ ‘ವಾರ್ಷಿಕ ಸ್ಥಳೀಯ ಪಾಸ್’ ಘೋಷಿಸಿದೆ. ಸ್ಥಳೀಯರಿಗೆ ಟೋಲ್ ಪಾವತಿಯಲ್ಲಿ ರಿಲೀಫ್ ನೀಡಿದ್ದು, ನಗರ ಪ್ರದೇಶದ ಟೋಲ್ ಪ್ಲಾಜಾಗಳಿಗೆ ವಾರ್ಷಿಕ ಪಾಸ್ ಶುಲ್ಕ 3,000 ರೂ. ಹಾಗೂ ಗ್ರಾಮೀಣ ಪ್ರದೇಶದ ಟೋಲ್ ಪ್ಲಾಜಾಗಳಿಗೆ ವಾರ್ಷಿಕ ಪಾಸ್ ಶುಲ್ಕ 1,500 ರೂ. ನಿಗದಿ ಮಾಡಿದ್ದು, ಸ್ಥಳೀಯರ ಅನುಕೂಲಕ್ಕಾಗಿ ಈ ವಿಶೇಷ ವಾರ್ಷಿಕ ಪಾಸ್ ಜಾರಿಗೆ ತೀರ್ಮಾನಿಸಿದೆ.