ಫಿಲಿಪೈನ್ಸ್ನ ಸೆಬು ನಗರದಲ್ಲಿ ನಡೆಯುತ್ತಿರುವ ಆಸಿಯಾನ್ ರಕ್ಷಣಾ ಸಚಿವರ ಹಾಗೂ ಅದರ ಸಹಭಾಗಿ ದೇಶಗಳ ಶೃಂಗಸಭೆಯ ವೇಳೆ ನಡೆದ ಅಮೆರಿಕದ ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಜೊತೆಗಿನ ದ್ವಿಪಕ್ಷೀಯ ಸಭೆಯಲ್ಲಿ, ಭಯೋತ್ಪಾದಕ ಸಂಸ್ಥೆಗಳಿಗೆ ಬೆಂಬಲ, ತರಬೇತಿ ಅಥವಾ ಧನಸಹಾಯ ನೀಡುವ ದೇಶಗಳ ವಿರುದ್ಧ ಜಾಗತಿಕ ಸಮುದಾಯವು "ಶೂನ್ಯ ಸಹಿಷ್ಣುತೆ" ತಳೆಯಬೇಕು ಎಂದು ರಾಜನಾಥ್ ಸಿಂಗ್ ಬಲವಾಗಿ ಪ್ರತಿಪಾದಿಸಿದ್ದಾರೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಅಂಕಿತ ಹಾಕಲಾದ '10 ವರ್ಷಗಳ ಭಾರತ-ಅಮೆರಿಕ ರಕ್ಷಣಾ ಚೌಕಟ್ಟು ಒಪ್ಪಂದ'ದ ಅನುಷ್ಠಾನ ಮತ್ತು ಪ್ರಗತಿಯನ್ನು ಪರಿಶೀಲಿಸುವುದು ಈ ಸಭೆಯ ಮುಖ್ಯ ಉದ್ದೇಶವಾಗಿತ್ತು.