ಮಹಿಳಾ ಪ್ರೀಮಿಯರ್ ಲೀಗ್ 2027ರ ಮಿನಿ ಹರಾಜು ಮುಗಿದಿದೆ. ಯುಪಿ ವಾರಿಯರ್ಸ್ 1.1 ಕೋಟಿಗೆ ಸೋಫಿ ಮೊಲಿನ್ಯೂಕ್ಸ್ರನ್ನು ಖರೀದಿಸಿ ಗಮನ ಸೆಳೆದಿದೆ. ಗ್ರೇಸ್ ಹ್ಯಾರಿಸ್ ಕೂಡ ಯುಪಿ ಸೇರಿದ್ದಾರೆ. ಐದು ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಬಲಪಡಿಸಿಕೊಳ್ಳಲು ಪ್ರತಿಭಾವಂತ ಆಟಗಾರ್ತಿಯರನ್ನು ಸೇರ್ಪಡೆ ಮಾಡಿಕೊಂಡಿವೆ. ಆರ್.ಸಿ.ಬಿ, ಮುಂಬೈ, ಡೆಲ್ಲಿ ಹಾಗೂ ಗುಜರಾತ್ ತಂಡಗಳು ಸಹ ಪ್ರಮುಖ ಆಟಗಾರ್ತಿಯರನ್ನು ಖರೀದಿಸಿವೆ. ಮಹಿಳಾ ಪ್ರೀಮಿಯರ್ ಲೀಗ್ 2027ರ ಮಿನಿ ಹರಾಜು ಮುಕ್ತಾಯಗೊಂಡಿದೆ. ಮುಂಬರುವ ಆವೃತ್ತಿಗೆ ಸಜ್ಜಾಗುತ್ತಿರುವ ಐದು ಫ್ರಾಂಚೈಸಿಗಳು ತಮ್ಮ ತಂಡಗಳಿಗೆ ಹಲವು ಪ್ರತಿಭಾವಂತ ಆಟಗಾರ್ತಿಯರನ್ನು ಸೇರ್ಪಡೆ ಮಾಡಿಕೊಂಡಿವೆ.