ಬಾಲಿವುಡ್ ನಟ ಸೈಫ್ ಅಲಿ ಖಾನ್ ತಮಾಷೆಗೆ ಹೇಳಿದ ಮಾತೊಂದು ಜಾಲತಾಣದಲ್ಲಿ ಟ್ರೆಂಡ್ ಆಗಿ, ಎರಡು ವರ್ಷಗಳ ತುಪ್ಪ ಅವರ ಮನೆ ಸೇರುವಂತೆ ಮಾಡಿದೆ! ಹೌದು, ಕಳೆದ ಸೆಪ್ಟೆಂಬರ್ನಲ್ಲಿ "ಹೈವಾನ್' ಚಿತ. ಹೌದು, ಕಳೆದ ಸೆಪ್ಟೆಂಬರ್ನಲ್ಲಿ "ಹೈವಾನ್' ಚಿತ್ರದ ಪ್ರಚಾರದ ವೇಳೆ ನಟ ಅಕ್ಷಯ್ ಕುಮಾರ್ ಜತೆ ಸೈಫ್ ಕೂಡ "ಕೌನ್ ಬನೇಗಾ ಕರೋಡ್ಪತಿ' ಸೀಸನ್ 18ರಲ್ಲಿ ಪಾಲ್ಗೊಂಡಿದ್ದರು. 10ನೇ ಪ್ರಶ್ನೆಗೆ ಸರಿಯಾದ ಉತ್ತರ ನೀಡುವವರಿಗೆ "ಗೋವರ್ಧನ್ ಘೀ' ವತಿಯಿಂದ ಎರಡು ವರ್ಷಗಳ ತುಪ್ಪ ಸಿಗಲಿದೆ ಎಂದು ನಿರೂಪಕ ಅಮಿತಾಭ್ ಬಚ್ಚನ್ ಹೇಳಿದ್ದರು. ಆ ಸಂಚಿಕೆ ಮುಗಿದ ಕೆಲ ದಿನಗಳಲ್ಲೇ ಅ. 11ರಂದು ಸೈಫ್ ಅಲಿ ಖಾನ್ ಇನ್ಸ್ಟಾಗ್ರಾಂನಲ್ಲಿ ಖಾತೆ ತೆರೆದರು.