ಕರ್ನಾಟಕದಲ್ಲಿ ಒಂದೊಂದೆ ಪರೀಕ್ಷಾ ಅಕ್ರಮಗಳು ಹೊರಬರುತ್ತಿವೆ. ಸದ್ಯ ಕೆಪಿಎಸ್ಸಿ ಪರೀಕ್ಷಾ ಅಕ್ರಮ ಕೋಲಾಹಲ ನಡುವೆ ಇದೀಗ ಕೆಇಎ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ ಎನ್ನುವ ಅನುಮಾನಗಳು ಹುಟ್ಟಿಕೊಂಡಿದ್ದು, ಅಭ್ಯರ್ಥಿಯೋರ್ವನ ವಿರುದ್ಧ ತನಿಖೆಗೆ ಕೆಇಎ ಆದೇಶಿಸಿದೆ. ಅಷ್ಟಕ್ಕೂ ಆಗಿದ್ದೇನು? ಅಭ್ಯರ್ಥಿ ವಿರುದ್ಧ ತನಿಖೆಗೆ ಆದೇಶಿಸಿದ್ಯಾಕೆ? ಎನ್ನುವ ಸಂಪೂರ್ಣ ವಿವರ ಇಲ್ಲಿದೆ. ಬೆಂಗಳೂರು/ಹಾವೇರಿ, (ಅಕ್ಟೋಬರ್ 28): ಕೆಪಿಎಸ್ಸಿ ನೇಮಕಾತಿ ಹಗರಣ ಪ್ರಕರಣ ಕೋಲಾಹಲ ಇನ್ನು ತಣ್ಣಗಾಗಿಲ್ಲ. ರಾಜಕೀಯ ನಾಯಕರ ಆರೋಪ ಪ್ರತ್ಯಾರೋಗಳ ನಡುವೆ ತನಿಖೆ, ಹೋರಾಟ, ಪ್ರತಿಭಟನೆಗಳು ಒಂದಡೆಯಾದರೆ, ಮತ್ತೊಂದೆಡೆ ಕೆಇಎ ಪರೀಕ್ಷೆಯಲ್ಲೂ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ.