ಹೆಚ್ಚಿನ ಉದ್ಯೋಗಿಗಳ ದೂರು ಅಂದ್ರೆ ಹುಷಾರಿಲ್ಲ ಅಂದ್ರು ರಜೆ ಕೊಡಲ್ಲ ಅನ್ನೋದು. ಆದರೆ ಇಲ್ಲೊಬ್ಬರು ವ್ಯಕ್ತಿ ಹುಷಾರಿಲ್ಲ ರಜೆ ಬೇಕೆಂದು ರಾತ್ರಿ 11 ಕ್ಕೆ ಮೆಸೇಜ್ ಮಾಡಿದ್ದು ಸಿಇಒ ರಜೆ ತೆಗೆದುಕೊಳ್ಳಿ ಕೆಲಸಕ್ಕಿಂತ ಆರೋಗ್ಯ ಮುಖ್ಯ ಎಂದು ಹೇಳಿದ್ದಾರಂತೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಿಇಒ ನಡೆಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ. ಕಾರ್ಪೊರೇಟ್ (corporate) ಹಾಗೂ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಕಷ್ಟ ಹೇಳಲಾಗದು. ಒತ್ತಡ ತುಂಬಿದ ಕೆಲಸ, ರಜೆ ಅಂತೂ ಸಿಗೋದೇ ಇಲ್ಲ.