ರಾಮ್ ಚರಣ್ ನಟಿಸಿ, ಶಂಕರ್ ನಿರ್ದೇಶಿಸಿ ದಿಲ್ ರಾಜು ಬಂಡವಾಳ ಹೂಡಿದ್ದ ‘ಗೇಮ್ ಚೇಂಜರ್’ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳಿದ್ದವು. ಆದರೆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೀನಾಯವಾಗಿ ಸೋತಿತು. ಅಸಲಿಗೆ ಆ ಸಿನಿಮಾದ ಕತೆಯನ್ನು ತಮಿಳಿನ ಪ್ರತಿಭಾವಂತ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಬರೆದಿದ್ದರು. ಇದೀಗ ಸುಬ್ಬರಾಜು ಅವರು ಸಂದರ್ಶನವೊಂದರಲ್ಲಿ ಮಾತನಾಡಿ, ತಮ್ಮ ಕತೆಯನ್ನು ವಿಪರೀತ ಬದಲಾವಣೆ ಮಾಡಲಾಗಿದೆ ಎಂದಿದ್ದಾರೆ. ‘ರಾಮ್ ಚರಣ್ ನಟಿಸಿರುವ ‘ಗೇಮ್ ಚೇಂಜರ್’ ಕಳೆದ ವರ್ಷ ಬಿಡುಗಡೆ ಆಗಿತ್ತು. ‘ರೋಬೊ’, ‘ಅನ್ನಿಯನ್’, ‘ಬಾಯ್ಸ್’, ‘ಇಂಡಿಯನ್’ ಇನ್ನೂ ಹಲವಾರು ಕಲ್ಟ್ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ದೇಶಿಸಿರುವ ಶಂಕರ್ ಅವರು ‘ಗೇಮ್ ಚೇಂಜರ್’ ಸಿನಿಮಾ ನಿರ್ದೇಶಿಸಿದ್ದರು.