ಚಳಿಗಾಲದಲ್ಲಿ ಅಷ್ಟಾಗಿ ಎಸಿಯನ್ನು ಯಾರು ಕೂಡ ಬಳಕೆ ಮಾಡೋದಿಲ್ಲ. ಚಳಿಗಾಲ ಮುಗಿಯುವರೆಗೂ ಅದನ್ನು ಆಫ್ ಮಾಡಿಡುತ್ತಾರೆ. ಆದರೆ ಆ ಎಸಿಯ ಒಳಾಂಗಣ ಮತ್ತು ಹೊರಾಂಗಣ ಘಟಕದ ಬಗ್ಗೆ ಕಾಳಜಿವಹಿಸುವುದನ್ನು ಮರೆತೇ ಬಿಡುತ್ತಾರೆ. ಈ ಸಣ್ಣ ತಪ್ಪು ಮುಂದಿನ ಬಾರಿ ಎಸಿ ಸರಿಯಾಗಿ ಕಾರ್ಯನಿರ್ವಹಿಸದಿರಲು ಕಾರಣವಾಗಬಹುದು. ಆದ್ದರಿಂದ ಚಳಿಗಾಲದಲ್ಲಿ ಎಸಿ ಆಫ್ ಮಾಡಿಡುವಾಗ ಈ ಕೆಲವೊಂದು ವಿಷಯಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಈ ಸೀಸನ್ನಲ್ಲಿ ಮೈ ಕೊರೆಯುವು ಚಳಿ ಇರುವುದರಿಂದ ಅಷ್ಟಾಗಿ ಯಾರು ಕೂಡ ಎಸಿ (air conditioner) ಬಳಕೆ ಮಾಡೋದೇ ಇಲ್ಲ. ಹಲವು ದಿನಗಳವರೆಗೆ ಅಂದರೆ ಚಳಿಗಾಲ ಮುಗಿಯುವವರೆಗೆ ಎಸಿ ಆಫ್ ಮಾಡಿಡುತ್ತಾರೆ.