ನಟನೆಗಾಗಿ ರಾಷ್ಟ್ರಪ್ರಶಸ್ತಿಯನ್ನೂ ಸಹ ಪಡೆದಿರುವ ಕೀರ್ತಿ ಸುರೇಶ್, ತಮಿಳು, ಮಲಯಾಳಂ, ತೆಲುಗು, ಹಿಂದಿ ಭಾಷೆ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಕಳೆದ 13 ವರ್ಷಗಳಿಂದಲೂ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿರುವ ಕೀರ್ತಿ ಸುರೇಶ್, ಹಲವಾರು ಹಿಟ್ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಆದರೆ ತಮ್ಮ ಯಾವ ಸಿನಿಮಾ ಸಹ ನೋಡದ ನಟಿಯೊಬ್ಬರಿಗೆ ತಮ್ಮ ಎರಡು ಸಿನಿಮಾಗಳನ್ನಷ್ಟೆ ನೋಡುವಂತೆ ಕೀರ್ತಿ ಸುರೇಶ್ ಸಲಹೆ ನೀಡಿದ್ದಾರೆ. ಕೀರ್ತಿ ಸುರೇಶ್, ದಕ್ಷಿಣದ ಜನಪ್ರಿಯ ಮತ್ತು ಬೇಡಿಕೆಯ ನಟಿ. ನಟನೆ, ಸೌಂದರ್ಯ, ನೃತ್ಯ ಎಲ್ಲವೂ ಕೆಲವೇ ಪರಿಪೂರ್ಣ ನಟಿಯರಲ್ಲಿ ಒಬ್ಬರು ಕೀರ್ತಿ ಸುರೇಶ್.