ಭಾರತ ಕ್ರಿಕೆಟ್ ತಂಡವು (Team India) ಇದೇ ತಿಂಗಳು ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ದೊಡ್ಡ ಮಹತ್ವಾಕಾಂಕ್ಷೆಯೊಂದಿಗೆ ಆರಂಭ ಆಗುತ್ತಿರುವ ಬಿಗ್ ಈವೆಂಟ್ಗೆ ಟೀಂ ಇಂಡಿಯಾದಲ್ಲಿ ಗಾಯದ ಸಮಸ್ಯೆ ಕಾಡಿದೆ. ಅಂದಹಾಗೆ ಈ ಪ್ರವಾಸದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ (New Zealand) ವಿರುದ್ಧ ಐದು ಏಕದಿನ ಪಂದ್ಯ, ಐದು ಟಿ20 ಹಾಗೂ ಎರಡು ಟೆಸ್ಟ್ ಪಂದ್ಯಗಳನ್ನ ಆಡಲಿದೆ. ಕೆಲವು ಆಟಗಾರರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗೋದಿಲ್ಲ. ಎಷ್ಟೇ ಪ್ರತಿಭೆ ತೋರಿಸಿದರೂ ತಂಡದಲ್ಲಿ ಚಾನ್ಸ್ ಸಿಗಲ್ಲ. ಇನ್ನು ಕೆಲವರಿಗೆ ತಂಡದಲ್ಲಿ ಅವಕಾಶ ಸಿಕ್ಕರೂ ಆಡುವ ಭಾಗ್ಯ ಸಿಗೋದಿಲ್ಲ.