ನವದೆಹಲಿ: ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ (Sanjay Kishan Kaul) ಅವರ ಮುಂಬರುವ ವಿಥೌಟ್ ಫಿಯರ್ ಆರ್ ಫೇವರ್ ಆತ್ಮಕತೆಯು ವ್ಯಾಪಕ ಚರ್ಚೆ ಮತ್ತು ವಿವಾದಕ್ಕೆ ಗ್ರಾಸ. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇಮಕಾತಿ ಪಟ್ಟಿಯಲ್ಲಿ ಆರನೇ ಹೆಸರನ್ನು ಸೇರಿಸುವ ವಿಚಾರದಲ್ಲಿ ಅಂದಿನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರೊಂದಿಗೆ ತಮಗಿದ್ದ ಭಿನ್ನಾಭಿಪ್ರಾಯಗಳನ್ನು ಅವರು ಬಹಿರಂಗಪಡಿಸಿದ್ದರು. ಆ ನಿರ್ದಿಷ್ಟ ಅಭ್ಯರ್ಥಿಯು ತನಗೆ ಹಾಗೂ ಕೊಲಿಜಿಯಂನ ಇತರ ಸದಸ್ಯರಿಗೆ ಒಪ್ಪಿಗೆಯಾಗಿರಲಿಲ್ಲ ಎಂದು ತಿಳಿಸಿದ್ದ ಕೌಲ್, ಸಿಜೆಐ ಚಂದ್ರಚೂಡ್ ಅವರು ಕೊಲಿಜಿಯಂ ಸಭೆಗೂ ಮುನ್ನವೇ ಸರ್ಕಾರದ ಅನುಮೋದನೆ ಪಡೆದಿರಬಹುದು ಎಂದು ಆರೋಪಿಸಿದ್ದರು.