Captain Smit Machchhar: ಸೆಪ್ಟೆಂಬರ್ 30ರಂದು ಫ್ಲೈದುಬೈ ವಿಮಾನದಲ್ಲಿ ನಡೆದ ಆಕ್ರಮಣದ ವೇಳೆ ಜೀವದ ಹಂಗು ತೊರೆದು ಪ್ರಯಾಣಿಕರ ಜೀವ ಉಳಿಸಿದ್ದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಹಾ. ದೊಡ್ಡ ದುರಂತವನ್ನು ತಪ್ಪಿಸಿ ಪ್ರಯಾಣಿಕರ ರಕ್ಷಣೆಗಾಗಿ ಮತ್ತು ವಿಮಾನದ ಭದ್ರತೆಗಾಗಿ ಸಿಬ್ಬಂದಿ ತೋರಿದ ಅಪ್ರತಿಮ ಧೈರ್ಯ ಹಾಗೂ ವೃತ್ತಿಪರತೆಯನ್ನು ಯುಎಇ ನಾಯಕತ್ವ ಮುಕ್ತಕಂಠದಿಂದ ಕೊಂಡಾಡಿದೆ. ದುಬೈನ ಕಿರಿಯ ರಾಜಕುಮಾರ ಹಾಗೂ ಉಪ ಪ್ರಧಾನಿ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ಮಂಗಳವಾರ ಈ ಗೌರವಗಳನ್ನು ಅಧಿಕೃತವಾಗಿ ವಿತರಿಸಿದರು.