ವಿಮಾನದ ಕಾಕ್ಪಿಟ್ನಲ್ಲಿ ದಾಳಿಗೆ ಒಳಗಾಗಿ ಗಾಯಗೊಂಡರೂ, ಧೈರ್ಯದಿಂದ ಬಾಗಿಲು ತೆರೆದು ನೂರಾರು ಜೀವ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರಿಗೆ ಯುಎಇ ಸರ್ಕಾರ ಪ್ರತಿಷ್ಠಿತ 'ಜಾಯೆದ್ II' ಪ್ರಶಸ್ತಿ ನೀಡಿ ಗೌರವಿಸಿದೆ. ಅವರ ಈ ಸಾಹಸಕ್ಕೆ ವಿಶ್ವದಾದ್ಯಂತ ನಾಯಕರಿಂದ ಪ್ರಶಂಸೆ ವ್ಯಕ್ತವಾಗಿದೆ, ಇಸ್ರೇಲ್ ನಾಗರಿಕ ಶೌರ್ಯ ಪ್ರಶಸ್ತಿಯನ್ನೂ ಘೋಷಿಸಿದೆ. ಫ್ಲೈದುಬೈಗೆ ಸೇರಿದ ಬೋಯಿಂಗ್ 737 (FZ1073) ವಿಮಾನವು ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಸ್ರೇಲ್ನ ಬೆನ್ ಗುರಿಯನ್ ವಿಮಾನ ನಿಲ್ದಾಣದತ್ತ ಪ್ರಯಾಣ ಬೆಳೆಸಿದ್ದಾಗ ಘಟನೆ ನಡೆದಿದೆ.