ದೀಪಾವಳಿ ಮತ್ತು ಛತ್ ಪೂಜೆ ನಿಮಿತ್ತ ನೈಋತ್ಯ ರೈಲ್ವೆ (SWR) ಹುಬ್ಬಳ್ಳಿ ಮತ್ತು ರಾಜಸ್ಥಾನದ ಖಾತಿಪುರ (ಜೈಪುರ) ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆ ಆರಂಭಿಸಿದೆ. ಅಕ್ಟೋಬರ್ 31 ರಿಂದ ಡಿಸೆಂಬರ್ 07 ರವರೆಗೆ ವಾರಕ್ಕೊಮ್ಮೆ ಸಂಚರಿಸಲಿರುವ ಈ ರೈಲು, ಹಬ್ಬದ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ. ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಹಾಗೂ ರಾಜಸ್ಥಾನದ ಪ್ರಯಾಣಿಕರಿಗೆ ಇದು ಅನುಕೂಲಕರವಾಗಿದೆ. ಹುಬ್ಬಳ್ಳಿ, ಅ.28: ಮುಂಬರುವ ದೀಪಾವಳಿ ಹಬ್ಬ ಹಾಗೂ ಛತ್ ಪೂಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ನೈಋತ್ಯ ರೈಲ್ವೆ (SWR) ಮಹತ್ವದ ನಿರ್ಧಾರ ಕೈಗೊಂಡಿದೆ.