ಕೇವಲ 5 ಓವರ್ಗಳಲ್ಲಿ 100 ರನ್ಗಳು, ಪವರ್ಪ್ಲೇನಲ್ಲಿ 118 ರನ್ಗಳು, 7.1 ಓವರ್ಗಳಲ್ಲಿ 133 ರನ್ಗಳು... ಇದು ವೆಲ್ಟಿಂಗ್ಟನ್ ಮೈದಾನದಲ್ಲಿ ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ ಎಬ್ಬಿಸಿದ ರನ್ ಅಲೆ. ಕಿವೀಸ್ನ ಅನುಭವಿ ಬೌಲರ್ಗಳನ್ನೇ ಚೆಂಡಾಡಿದ ಸೂರ್ಯಾಭಿಷೇಕ ಜೋಡಿ ಓಪನಿಂಗ್ ಸ್ಟೇಟ್ಮೆಂಟ್ ಮೂಲಕ ಎದುರಾಳಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಭಾರತೀಯ ಕ್ರಿಕೆಟ್ನ ಟಿ20 ಶೈಲಿ ಈಗ ಸಂಪೂರ್ಣವಾಗಿ ಬದಲಾಗಿದೆ. ಮೊದಲ ಓವರ್ನಿಂದಲೇ ಎದುರಾಳಿ ಬೌಲರ್ಗಳ ಮೇಲೆ ಸವಾರಿ ಮಾಡುವ ಹೊಸ ಆಕ್ರಮಣಕಾರಿ ನೀತಿಯನ್ನು ಟೀಮ್ ಇಂಡಿಯಾ ಅಪ್ಪಿಕೊಂಡಿದೆ. ಈ ಹೊಚ್ಚ ಹೊಸ ತಂತ್ರಕ್ಕೆ ಬಲ ತುಂಬುತ್ತಿರುವುದು ಯುವ ಎಡಗೈ ಬ್ಯಾಟರ್ಗಳಾದ ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ.