ಬೆಂಗಳೂರಿನಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಶೇ. 45.5 ರಷ್ಟು ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ. ಒಟ್ಟು 46.88 ಲಕ್ಷ ಹೆಸರುಗಳು ಎಎಸ್ಡಿಡಿಒ ವ್ಯಾಪ್ತಿಗೆ ಸೇರಿದ್ದು, ಹೆಸರು ಬಿಟ್ಟುಹೋಗಿರುವ ಅರ್ಹ ಮತದಾರರು ಫಾರ್ಮ್-6 ಮೂಲಕ ಮರುಅರ್ಜಿ ಸಲ್ಲಿಸಬಹುದೆಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ. ಬೆಂಗಳೂರು, ಅಕ್ಟೋಬರ್ 28: ಬೆಂಗಳೂರಿನಲ್ಲಿ ನಡೆಸಲಾದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯ ಅಂತಿಮ ವರದಿ ಹೊರಬಿದ್ದಿದ್ದು, ನಗರದ ಒಟ್ಟು ಮತದಾರರ ಪೈಕಿ ಸುಮಾರು ಶೇಕಡಾ 45.5 ರಷ್ಟು ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಡಲ್ಪಟ್ಟಿರುವುದು ಬಹಿರಂಗವಾಗಿದೆ. ಎಸ್ಐಆರ್ ಆರಂಭಕ್ಕೂ ಮುನ್ನ ಬೆಂಗಳೂರಿನಲ್ಲಿ 1.