ಪಂಜಾಬ್ನಲ್ಲಿ ಮಾದಕ ವಸ್ತುಗಳ ಸೇವನೆಯು ಪುರುಷರಲ್ಲಿ ಬಂಜೆತನದ ಆತಂಕ ಹೆಚ್ಚಿಸಿದೆ. ಭಟಿಂಡಾ ಏಮ್ಸ್ ವರದಿಯ ಪ್ರಕಾರ, 12,000 ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ, ಚಲನೆ ಮತ್ತು ಗುಣಮಟ್ಟದಲ್ಲಿ ಗಂಭೀರ ದೋಷಗಳು ಪತ್ತೆಯಾಗಿವೆ. ಇದು ಡಿಎನ್ಎ ಮಟ್ಟದಲ್ಲೂ ಪರಿಣಾಮ ಬೀರಿ, ಹುಟ್ಟುವ ಮಕ್ಕಳಲ್ಲಿ ಜನ್ಮಜಾತ ದೋಷಗಳಿಗೆ ಕಾರಣವಾಗಬಹುದು. ಈ ಸಮಸ್ಯೆ ಭವಿಷ್ಯದ ಪೀಳಿಗೆಯ ಆರೋಗ್ಯ ಹಾಗೂ ರಾಜ್ಯದ ಜನಸಂಖ್ಯಾ ಬೆಳವಣಿಗೆಗೆ ಕಂಟಕವಾಗಿದೆ. ಚಂಡೀಗಢ, ಅಕ್ಟೋಬರ್ 28:ಪಂಜಾಬ್ನಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಬಳಕೆ ಈಗ ಯುವಜನರ ಆರೋಗ್ಯದ ಬಗ್ಗೆ ಆತಂಕ ಮೂಡಿಸಿದೆ.