ಗೋಣಿಕೊಪ್ಪ: ಸಮಾಜದ ಪರಿವರ್ತನೆಗೆ ಆದರ್ಶಗಳು ಬಹು ಮುಖ್ಯ. ಇಂತಹ ಜ್ಞಾನ ಮತ್ತು ಆದರ್ಶನವನ್ನು ಜಗತ್ತಿಗೆ ರಾಮಾಯಣದ ಮೂಲಕ ವಾಲ್ಮೀಕಿ ಮಹರ್ಷಿಗಳು ಸಾರಿದರು ಎಂದು ಪೊನ್ನಂಪೇಟೆ ಸಿಐಟಿಪಿಯು ಕಾಲೇಜಿನ. ರಾಮಾಯಣ ಜಗತಿಗೆ ಆದರ್ಶ ಬದುಕನ್ನು ತಿಳಿಸಿಕೊಟ್ಟ ಮಹಾಕಾವ್ಯ. ವಾಲ್ಮೀಕಿಯ ಮೇರು ವ್ಯಕ್ತಿತ್ವ ನಮಗೆ ಆದರ್ಶವಾದಾಗ ನಮ್ಮ ಬದುಕಿನ ಪರಿವರ್ತನೆ ಸಾಧ್ಯವಾಗಬಲ್ಲದು ಎಂದು ಹೇಳಿದರು.ಬದುಕಿನಲ್ಲಿ ಪರಿವರ್ತನೆ ಹೊಂದಬೇಕು. ಜ್ಞಾನ ಮತ್ತು ಆದರ್ಶವನ್ನು ಮೈಗೂಡಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬದುಕನ್ನು ತರಬೇಕು. ಈ ನಿಟ್ಟಿನಲ್ಲಿ ತತ್ವ, ಆದರ್ಶ, ಮಾನವೀಯತೆ, ಧರ್ಮ, ದಯೆಗಳಂತಹ ಅಂಶಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ. ಇಂತಹ ಮೌಲ್ಯಗಳು ರಾಮಾಯಣದ ಮಹಾಕಾವ್ಯದಲ್ಲಿ ವಾಲ್ಮೀಕಿ ಋಷಿಗಳು ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.