ಗೋಣಿಕೊಪ್ಪ: ಚಂಗ್ರಾಂದಿ ಪತ್ತಲೋದಿಯ ಕಾರ್ಯಕ್ರಮದಲ್ಲಿ ಕೊಡವ ಸಂಸ್ಕೃತಿ ಕುರಿತು ಅರಿತುಕೊಳ್ಳಲು ಸಾಧ್ಯ ಎಂದು ವಕೀಲ ಜಮ್ಮಡ ಅಯ್ಯಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.ತಾವಳಗೇರಿ ಮೂಂದ್ ನಾಡ್ ಕೊಡವ ಸ. ಎಲ್ಲರೂ ಒಂದಾಗಿ ಸೇರಲು ಸಿಕ್ಕಿರುವ ಈ ಅವಕಾಶ ಬಳಸಿಕೊಂಡು ಕಲಾವಿದರು ಇನ್ನಷ್ಟು ಬೆಳೆಯಬೇಕೆಂದು ಕಿವಿಮಾತು ಹೇಳಿದರು.ಅಂತಾರಾಷ್ಟ್ರೀಯ ಪರ್ವತಾರೋಹಿ ಜಮ್ಮಡ ಪ್ರೀತ್ ಅಯ್ಯಣ್ಣ ಮಾತನಾಡಿ, ನಾನು ಸೀರೆಯನ್ನೇ ಧರಿಸಿ ಹಿಮಾಲಯ ಪರ್ವತವಲ್ಲದೆ ಆಫ್ರಿಕಾ, ಯೂರೋಪ್, ಆಸ್ಟ್ರೇಲಿಯ ಖಂಡಗಳ ಅತಿ ಎತ್ತರದ ಶಿಖರಗಳನ್ನೇರಿದ್ದೇನೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರಿರುವುದನ್ನು ಗಮನಿಸಿದರೆ ಕೊಡವತಿಯರಿಗೆ ನಮ್ಮ ಸಂಸ್ಕೃತಿಯ ಬಗ್ಗೆ ಎಷ್ಟೊಂದು ಗೌರವ ಹಾಗೂ ಅಭಿಮಾನವಿದೆ ಎಂಬುದು ತಿಳಿಯುತ್ತದೆ.