ನವದೆಹಲಿ: ಅ. 12ರಂದು ಕಾನೂನು ಸುವ್ಯವಸ್ಥೆ ನಿಮ್ಮ ವ್ಯಾಪ್ತಿ ಅಲ್ಲ ಅಂದ್ರೆ ರಾಜೀನಾಮೆ ನೀಡಿ ಎಂಬ ವಿವಾದಾತ್ಮಕ ಪೋಸ್ಟ್ಗೆ ಸಂಬಂಧಿಸಿದಂತೆ ಕೊನೆಗೂ ಕೇರಳ ಕಾಂಗ್ರೆಸ್, ಮಂಗಳವಾರ(ಅ. 27) ಸಿಜೆಐ. 27) ಸಿಜೆಐ ಸೂರ್ಯಕಾಂತ್ ಅವರಿಗೆ ಬೇಷರತ್ತಾದ ಕ್ಷಮೆಯಾಚಿಸಿದೆ. ಪೋಸ್ಟ್ ಅನ್ನು ಅನುಮತಿಯಿಲ್ಲದೆ ಪ್ರಕಟಿಸಲಾಗಿದೆ ಎಂದು ಕೇರಳ ಕಾಂಗ್ರೆಸ್ ಘಟಕ ಹೇಳಿದ್ದು, ಅದಕ್ಕೆ ಕಾರಣರಾದ ವ್ಯಕ್ತಿ ವಿಜಯ್ ತೊಟ್ಟತಿಲ್ ಅವರನ್ನು ಸ್ಥಾನದಿಂದ ತೆಗೆದುಹಾಕಲಾಗಿದೆ ಎಂದು ತಿಳಿಸಿದೆ. ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ನ ಜಂಟಿ ಕಾರ್ಯದರ್ಶಿ ವಕೀಲ ಮನೀಶ್ ದುಬೆ ಅವರ ಕಾನೂನು ನೋಟಿಸ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್, ಪೋಸ್ಟ್ ಮತ್ತು ಸಿಜೆಐ ವಿರುದ್ಧ ಬಳಸಿದ ಅಗೌರವದ ಭಾಷೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.