ಬೆಂಗಳೂರು: ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳಿಂದ ವಿಧಾನ ಪರಿಷತ್ನ ಒಟ್ಟು ನಾಲ್ಕು ಸ್ಥಾನಗಳಿಗೆ ನಡೆದಿದ್ದ ದ್ವೆವಾರ್ಷಿಕ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಎನ್ಡಿಎ ಅಭ್ಯರ್ಥಿಗಳು ಎರಡು ಕ. ಈ ಬಾರಿಯೂ ಬಿಜೆಪಿ ಮೂರೂ ಸ್ಥಾನ ಉಳಿಸಿಕೊಳ್ಳುವ ದಾರಿಯಲ್ಲಿದೆ. ಜೆಡಿಎಸ್ ಒಂದು ಸ್ಥಾನ ಗಳಿಸಿದೆ.ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಎನ್ಡಿಎ ಅಭ್ಯರ್ಥಿ ಜೆಡಿಎಸ್ನ ಎ.ಪಿ.ರಂಗನಾಥ್ ಕಾಂಗ್ರೆಸ್ನ ಪುಟ್ಟಣ್ಣ ವಿರುದ್ಧ 908 ಮತಗಳ ಅಂತರದಿಂದ ಜಯಗಳಿಸುವ ಮೂಲಕ ಕಳೆದ ಬಾರಿಯ ಸೋಲಿನ ಸೇಡು ತೀರಿಸಿಕೊಂಡಿದ್ದಾರೆ.ಆರಂಭದಿಂದ - ಅಂತ್ಯದವರೆಗೆ ಇಬ್ಬರ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿತ್ತು.ಮತ ಎಣಿಕೆಯ ಅಂತ್ಯದಲ್ಲಿ ಎ.ಪಿ. ರಂಗನಾಥ್ 10810 ಮತಗಳನ್ನು ಪಡೆದರೆ, ಆರನೇ ಗೆಲುವಿನ ನಿರೀಕ್ಷೆಯಲ್ಲಿದ್ದ ಪುಟ್ಟಣ್ಣ 9902 ಮತಗಳನ್ನು ಪಡೆದರು.