ವಿಶ್ವವಿಖ್ಯಾತ ಹಂಪಿಗೆ ಯುನೆಸ್ಕೋ ತಂಡ ಮೂರು ದಿನಗಳ ಭೇಟಿ ನೀಡಿದ್ದು, ವಿರೂಪಾಕ್ಷೇಶ್ವರ ದೇವಾಲಯ, ವಿಠಲ ಮಂದಿರ ಸೇರಿದಂತೆ ಪ್ರಮುಖ ತಾಣಗಳನ್ನು ಪರಿಶೀಲಿಸಿದೆ. ಸ್ಮಾರಕಗಳ ಸಂರಕ್ಷಣೆ, ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳ ಕುರಿತು ಸ್ಥಳೀಯರು, ಪ್ರವಾಸಿಗರಿಂದ ಮಾಹಿತಿ ಸಂಗ್ರಹಿಸಿದೆ. ಹಂಪಿಯ ಗತವೈಭವವನ್ನು ಮುಂದಿನ ಪೀಳಿಗೆಗೆ ತಲುಪಿಸಲು ತಂಡವು ಯೋಜನೆ ರೂಪಿಸಲು ಮುಂದಾಗಿದೆ. ಬಳ್ಳಾರಿ, ಅ.27: ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ವಿಶ್ವವಿಖ್ಯಾತ ಹಂಪಿ ಪ್ರವಾಸಿ ಸ್ಥಳಕ್ಕೆ ಯುನೆಸ್ಕೋ ತಂಡ ಭೇಟಿ ನೀಡಿದೆ.