ಆಸಿಯಾ, ಕುಮಾರಿ, ಕಿರಣ್ ಶಾಸ್ತ್ರಿ, ಜಗದೀಶ್, ಪ್ರಶಾಂತ್, ಗಗನ್ ಚಿನ್ನಪ್ಪ ಹಾಗೂ ಧನುಷ್ ಅವರು ಈ ವಾರ ನಾಮಿನೇಟ್ ಆಗಿದ್ದಾರೆ. ಅವರ ಪೈಕಿ ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಕೌತುಕ ನಿರ್ಮಾಣ ಆಗಿದೆ. ದೊಡ್ಮನೆಯಲ್ಲಿ ಉಳಿದುಕೊಳ್ಳಲು ಈ ಎಲ್ಲ ಸ್ಪರ್ಧಿಗಳು ತಮ್ಮ ಆಟದ ಶೈಲಿ ಬದಲಾಯಿಸಿಕೊಳ್ಳುವ ಅನಿವಾರ್ಯತೆ ಇದೆ. ‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ 50 ದಿನಗಳು ಕಳೆದಿವೆ. ಇನ್ನುಳಿದ ದಿನಗಳಲ್ಲಿ ಆಟದ ತೀವ್ರತೆ ಜಾಸ್ತಿ ಆಗಲಿದೆ. ಅದೇ ರೀತಿ, ವೈಲ್ಡ್ ಕಾರ್ಡ್ ಸ್ಪರ್ಧಿಗಳು ಕೂಡ ಆಟವನ್ನು ಮುಂದುವರಿಸಿದ್ದಾರೆ. ಸೆಲೆಬ್ರಿಟಿ, ಕಾಮನರ್ ಎಂಬ ವ್ಯತ್ಯಾಸ ಇಲ್ಲದೇ ಈಗ ಬಿಗ್ ಬಾಸ್ ಆಟ ಮುಂದುವರಿಯುತ್ತಿದೆ.