ಕೊಚ್ಚಿ: ಚೆರನಲ್ಲೂರು ರಸ್ತೆ ಅಪಘಾತ ಪ್ರಕರಣದಲ್ಲಿ ಸ್ಕೂಟರ್ ಸವಾರರೊಬ್ಬರ ಸಾವಿಗೆ ಕಾರಣನಾದ 17 ವರ್ಷದ ಆರೋಪಿಯ ತಂದೆಯನ್ನು ಇದೀಗ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.ಘಟನೆಗೆ ಸಂಬಂಧಿಸ. ವೇಗದಲ್ಲಿ ಬಂದು ಬೈಕ್ ಸವಾರನಿಗೆ ಗುದ್ದಿದ ಕಾರಣ, ಆತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಈ ಪ್ರಕರಣದ ಆರೋಪಿಯನ್ನು ಪ್ರಸ್ತುತ ನ್ಯಾಯಾಲಯಕ್ಕೆ ಒಪ್ಪಿಸಿರುವ ಪೊಲೀಸರಿಗೆ, ಆತನ ತಂದೆ ನ್ಯಾಯಾಧೀಶರು ಎಂಬ ವಿಚಾರವೂ ಗೊತ್ತಾಗಿದೆ. ತಾನು ಯೂಟ್ಯೂಬ್ ನೋಡಿ ಕಾರು ಚಲಾಯಿಸಲು ಕಲಿತೆ. ಮತ್ತು ತಂದೆಗೆ ತಿಳಿಯದಂತೆ ಕಾರನ್ನು ತೆಗೆದುಕೊಂಡು ಹೋಗಿದ್ದಾಗಿ ಬಾಲಕ ನೀಡಿದ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.