Save the Vote Rally: ದೆಹಲಿಯ ರಾಮಲೀಲಾ ಮೈದಾನದಲ್ಲಿ ನವೆಂಬರ್ 1ರಂದು ನಡೆಯಲಿರುವ ಬೃಹತ್ 'ಸೇವ್ ದಿ ವೋಟ್' ರ್ಯಾಲಿಗೂ ಮುನ್ನ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ 'ಎಕ್ಸ್'ನಲ್ಲಿ ‘ಸತ್ಯಂ. ಈ ಹೋರಾಟಕ್ಕೆ ಯಾವುದೇ ಪೂರ್ವಯೋಜಿತ ಪ್ಲಾನ್ ಬೇಕಿಲ್ಲ. ಇದು ನಿರಂತರವಾಗಿ ಸಾಗುವ ಶಿವನ ಮೆರವಣಿಗೆಯಂತೆ, ಯಾರು ಬೇಕಾದರೂ ಇದರಲ್ಲಿ ಭಾಗಿಯಾಗಬಹುದು ಎಂದಿದ್ದರು. ಇದಕ್ಕೂ ಮುನ್ನ ಸಂಸತ್ತಿನಲ್ಲಿ ಶಿವನ ಚಿತ್ರ ಪ್ರದರ್ಶಿಸಿ ಅಭಯಮುದ್ರೆ ಹಾಗೂ ನಿರ್ಭಯತೆಯ ಮಹತ್ವವನ್ನೂ ಅವರು ವಿವರಿಸಿದ್ದರು.ನವೆಂಬರ್ 1ರಂದು ದೆಹಲಿ ಚಲೋ ಕರೆಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕಲಾಗುತ್ತಿದೆ ಮತ್ತು ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.