ರಾಮಾಯಣ ಸಿನಿಮಾದಲ್ಲಿ ಸೀತೆಯಾಗಿ ನವೆಂಬರ್ 5ರಂದು ತೆರೆಗೆ ಬರಲಿರುವ ನಟಿ ಸಾಯಿ ಪಲ್ಲವಿ, ಕೇವಲ ಎರಡೇ ವಾರಗಳ ಬಳಿಕ ಧನುಷ್ ನಟನೆಯ ‘ಓಂ’ ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ರಕ್ತಚಂದನ ಕಳ್ಳಸಾಗಣೆ ತಡೆಯುವ ಖಡಕ್ ಸಿಬಿಐ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಗ್ಲಿಂಪ್ಸ್ ಸಖತ್ ವೈರಲ್ ಆಗಿದೆ. ನಟಿ ಸಾಯಿ ಪಲ್ಲವಿ ಅವರ ಹವಾ ಸದ್ಯ ಸಿನಿಮಾಗಳಲ್ಲಿ ಜೋರಾಗಿಯೇ ಮುಂದುವರಿದೆ. ರಾಮಾಯಣ ಮಹಾಕಾವ್ಯದ ಬೆನ್ನಲ್ಲೇ ಅವರ ಮತ್ತೊಂದು ಬಹುನಿರೀಕ್ಷಿತ ಸಿನಿಮಾದ ಅಪ್ಡೇಟ್ ಹೊರಬಿದ್ದಿದೆ. ನಟ ಧನುಷ್ ಹಾಗೂ ರಾಜಕುಮಾರ್ ಪೆರಿಯಸಾಮಿ ಕಾಂಬಿನೇಷನ್ನ ‘ಓಂ’ ಸಿನಿಮಾದಲ್ಲಿ ಸಾಯಿ ಪಲ್ಲವಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಇತ್ತೀಚೆಗೆ ಅವರ ಪಾತ್ರದ ಪರಿಚಯಾತ್ಮಕ ಗ್ಲಿಂಪ್ಸ್ ಬಿಡುಗಡೆಯಾಗಿದೆ.