Theni Sub Jail Escaape : ತಮಿಳುನಾಡಿನ ತೇಣಿ ಜಿಲ್ಲೆಯಲ್ಲಿರುವ ಜೈಲಿನಿಂದ ಹದಿನೇಳು ಕೈದಿಗಳು ಪರಾರಿಯಾಗಿದ್ದಾರೆ. ಇವರೆಲ್ಲಾ ವಿಚಾರಣಾಧೀನ ಕೈದಿಗಳಾಗಿದ್ದು ಇವರ ಮೇಲೆ ಕೊಲೆಯತ್ನ, ಡ್ರಗ್ಸ್ ಸಪ್ಲೈ ಸೇರಿದಂತೆ ವಿವಿಧ ಕೇಸುಗಳಿವೆ. ಪರಾರಿಯಾದವರ ಪೈಕಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಗೃಹ ಇಲಾಖೆ ತನಿಖೆಗೆ ಆದೇಶಿಸಿದೆ. ಚೆನ್ನೈ : ತಮಿಳುನಾಡಿನ ಕಾರಾಗೃಹದಿಂದ ಹದಿನೇಳು ವಿಚಾರಣಾಧೀನ ಕೈದಿಗಳು ಪರಾರಿಯಾಗಿದ್ದಾರೆ. ಪರಾರಿ ಆದವರನ್ನು ಪತ್ತೆಹಚ್ಚಲು ದೊಡ್ಡ ತಂಡವನ್ನು ಕಟ್ಟಲಾಗಿದ್ದು, ಇದುವರೆಗೆ ಪ್ರವೀಣ್ ಕುಮಾರ್, ಸಿಲಂಬರಸನ್, ರಾಜಕುಮಾರ್, ರಾಜಾ ಸಿಕಂದರ್ ಎನ್ನುವ ನಾಲ್ವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ರಾಜ್ಯದ ತೇಣಿ ಜಿಲ್ಲೆಯ ತೆಕ್ಕಂಪಟ್ಟಿ ಉಪಕಾರಾಗೃಹದಿಂದ ಕೈದಿಗಳು ಪರಾರಿಯಾಗಿದ್ದಾರೆ.